Submission 6504

ಸಿಗದ ನೀನು

ರಚನೆ : ಸಿದ್ದೇಗೌಡ

----------------------------------

ಸಿಗದ ನೀನು ನನ್ಯಾಕೆ ಇಷ್ಟು ಕಾಡುತ್ತಿರುವೆ? ನಾ ಇನ್ನೂ ಅರಳದ ಹೂವು.. ಅರಳುವ ಮುನ್ನವೇ ಬಾಡುತ್ತಿರುವೆ! ಬರಿದಾದ ಬಾಳಲ್ಲಿ ಕಂಡ ಕಾಮನ ಬಿಲ್ಲು ನೀನು, ನೀ ಮರೆಯಾಗುವುದರ ಅರಿವಿಲ್ಲದೆ ಕುಣಿದ ಮಗುವು ನಾನು.. ಮಳೆಯ ಗೈರು ಇಳೆಗೆ ವಿನೋದವೇ? ನಿನ್ನ ವಿದಾಯ ನನಗೆಂದಿಗೂ ವಿಷಾದವೇ..! ಇಲ್ಲಿಗೆ ನನ್ನ ಮಾತೆಲ್ಲವೂ ಮೌನ.! ಮುಂದುವರೆಯುವುದು ನಿನ್ನದೇ ನೆನಪುಗಳೊಂದಿಗೆ ನನ್ನ ಒಬ್ಬಂಟಿ ಯಾನ..

----------------------------------

ನೋಂದಣಿ ಐಡಿ : KPFS2-9650

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top