Submission 6502

ನೀಲಿಗಟ್ಟಿದ ನೋವು

ರಚನೆ : ಮೌನೇಶ ನವಲಹಳ್ಳಿ

----------------------------------

ಯಾವ ಬಣ್ಣ ಬಳಿಯಲಿ ನೀಲಿಗಟ್ಟಿದ ನೋವಿಗೆ ಯಾವ ಅಸ್ತ್ರವಿರಿಯಲಿ ಜೀವವಿರದ ಗಾಳಿಗೆ ಯಾರ ಪ್ರತಿಮೆ ತೋರಲಿ ದಯವಿಲ್ಲದ ಬಯಲಿಗೆ ಉಪಮೆಗಳ ಉಪ್ಪ ಸವರಿ ಮರೆತ ಗಾಯಗಳ ಕೆದರಿ ಯಾವ ಸಿದ್ಧಿ ಪಡೆಯಲಿ ಸಂತೈಸದ ಗಳಿಗೆಗೆ ಯಾವ ಮುಖವ ತೋರಲಿ ದೃಷ್ಟಿಯಿರದ ಕಂಗಳಿಗೆ ಹೃದಯದೊಳಕೆ ಕರೆಯಲಿಲ್ಲ ಉದರ ದನಿಯ ಕೇಳಲಿಲ್ಲ ಯಾವ ಶಬ್ಧಮಣಿಯಲಿ ಸಿಂಗರಿಸಲಿ ದೋಷವ ಯಾವ ಛಂದಶಾಸ್ತ್ರವಿಡಿದು ಎಷ್ಟು ಕಾಲ ಕಾಯಲಿ ರಾಜರಿರುವ ಊರಲಿ.

----------------------------------

ನೋಂದಣಿ ಐಡಿ : KPFS2-9649

0
Votes
95
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top