ಸಂಭಾಷಣೆ
ರಚನೆ : ಸುಪ್ರೀತ್ ಕೆ
----------------------------------
ಉಕ್ಕುತಿಹುದು ಭಾವವೊಂದು ಹಿಸುಕುತಿಹುದು ಉಸಿರನಿಂದು ಸಂಕಟವೆಂದೆನ್ನಿದನ್ನು ಕೂಗಿ ಕರೆಯಲೇ? ಹಾಡ ಕೇಳಿ ಹೃದಯ ಇಂದು ತೊಗೋ ನೀನು ಮನುಜ ಎಂದು ಕೊಟ್ಟ ದುಃಖವನ್ನಿದನ್ನು ಹೇಗೆ ಮರೆಯಲೇ? ಹೆದರಿ ಹೆದರಿ ಹೆದರಿಕೊಂಡು ಮುದುರಿ ಮುದುರಿ ಮುದುರಿಕೊಂಡು ಆಗುವ ನೋವನ್ನು ನಾನು ಹೇಗೆ ತಡೆಯಲೇ? ಬದಲು ಬದಲು ಬದಲುಗೊಂಡು ಎದುರು ಎದುರು ಎದುರುಗೊಂಡು ಆಗದ ನೋವನ್ನು ನಾನೇಕೆ ನೆನೆಯಲೇ? ಭಯವ ಬಿಟ್ಟು ಧೈರ್ಯ ಕಂಡು ಹುಸಿಯ ಬಿಟ್ಟು ನಿಜವ ಕಂಡು ಕಾಣುವ ದೀಪಕ್ಕೆ ಜೀವದ್ವಾರ ತೆರೆಯಲೇ? ಇರುಳು ಮುಗಿದು ಹಗಲು ಬಂದು ಅರಿವ ಬೆಳಕಿನಲ್ಲಿ ಮಿಂದು ಜೀವ ಜ್ಯೋತಿಯ ಕಂಡೆ ಮನದ ಮನೆಯಲೇ!
----------------------------------
ನೋಂದಣಿ ಐಡಿ : KPFS2-9587