ಕುಟುಂಬದ ಸಾಕಾರಮೂರ್ತಿ ನನ್ನಮ್ಮ
ರಚನೆ : ರಾಜೇಶ್ ಕೆ ಎಂ
----------------------------------
ನವಮಾಸ ಹೊತ್ತು ಸಾಕಿ ಸಲುಹಿದೆ ನೋವುಗಳನುಂಡು ಸಂತೋಷ ಹಂಚಿದೆ ಶುಚಿರುಚಿಯಾದ ಅಡುಗೆ ಮಾಡಿ ಉಣಬಡಿಸಿದೆ ನಿನ್ನ ಮಡಿಲಲ್ಲೇ ನಮ್ಮನ್ನು ಬೆಳೆಸಿದೆ. ನೀನೇ ನಮ್ಮ ಕುಟುಂಬದ ಆಧಾರಸ್ತಂಭ ಏನೇ ಸಮಸ್ಯೆ ಬಂದರೂ ಪರಿಹರಿಸುವೆ ಸುಲಭ ಸದಾ ನಮಗೆ ಒಳ್ಳೆಯದಾಗಲಿ ಎಂದು ಹಾರೈಸುವೆ. ಮುಕ್ಕೋಟಿ ದೇವರುಗಳು ನಿನ್ನಲ್ಲಿ ನೆಲೆಸಿವೆ ಅಮ್ಮ ನಿನ್ನ ಮಡಿಲೇ ನಮಗೆ ಆನಂದ ಧಾಮ ನಮಗಾಗಿ ಪಟ್ಟಿರುವೆ ಅಪಾರ ಪರಿಶ್ರಮ. ನಿನ್ನ ನಗುವೇ ನಮ್ಮ ಮನೆಗೆ ಬೆಳಕು ನಿನ್ನ ಮಮತೆಯ ಪ್ರೀತಿಯೊಂದೆ ಸಾಕು ನೀನು ನಮ್ಮೊಂದಿಗೆ ಇದ್ದರೆ ಅದುವೇ ಅರ್ಥಪೂರ್ಣ ಬದುಕು ನೀನೇ ನಮಗೆ ತಾಯಿಯಾಗಬೇಕು ಪ್ರತಿ ಜನ್ಮಕು.
----------------------------------
ನೋಂದಣಿ ಐಡಿ : KPFS2-9584