Submission 6368

ಮಾಧವನ ಮನದರಸಿ

ರಚನೆ : ಹೇಮಂತ್ ಸಾಗರ್.ಎನ್

----------------------------------

ಮಾಧವನ ಅಂಗಳದಲ್ಲಿ ಸಿಕ್ಕ ಮನದರಸಿ ನೀನು ಮನದಂಗಳದ ದೇಗುಲಕೆ ಆದೆ ದೇವತೆ ನೀನು ಮುಂಗುರುಳಂಚಲ್ಲಿ ಹೊಮ್ಮಿದ ಆ ನಿನ್ನ ಚೆಲುವು ಅಂದೇ ಶುರುವಾಯಿತು ನನ್ನಲ್ಲಿ ಉಲ್ಲಾಸದೊಲವು ಮತ್ತೆ ತಿರುಗಿ ನೋಡುವಂತೆ ಮಾಡಿದೆ ನೀ ಮೋಡಿ ನನಗರಿವಿಲ್ಲದೆ ಹರಿದು ಬಂತು ಪ್ರೀತಿಯ ಕೋಡಿ ನಿನ್ನ ಕಣ್ಣ ಸುಳಿಯಂಚಲ್ಲಿ ಹೊಮ್ಮಿದ ಆ ಕಿರಣ ನಿನ್ನವನಾಗಲು ಬೇರೇನು ಬೇಕು ಹೇಳು ಕಾರಣ ಹುಣ್ಣಿಮೆ ಚಂದ್ರನ ಬೆಳದಿಂಗಳಾಗು ನೀನು ನಿನ್ನ ತಲುಪಲು ಭೋರ್ಗರೆವ ಕಡಲಾಗುವೆ ನಾನು ಕಣ್ಮನ ಸೆಳೆಯುವ ನಗುಮುಖದ ತಾರೆ ನೀನಾದೆ ನನ್ನೊಳಗೆ ಭೂಲೋಕದ ಅಪ್ಸರೆ ನನ್ನರಸಿಯ ಚೆಲುವಿನ ವರ್ಣನೆ ಆದಿಪುರುಷನೇ ನಿನಗೆ ಅರ್ಪಣೆ

----------------------------------

ನೋಂದಣಿ ಐಡಿ : KPFS2-9545

0
Votes
103
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top