ಮುಳ್ಳಿಗೆಲ್ಲಿದೆ ಭಾಗ್ಯ ಮುಡಿಗೇರಲು
ರಚನೆ : ಪೂಜಾ ಎನ್ ಬಿ
----------------------------------
ಹೂವಿನ ಗಿಡದಲಿ ಮುಳ್ಳೇ ಇರಲಿ ಮುಳ್ಳಿನ ಗಿಡದಲಿ ಹೂವೇ ಇರಲಿ ಹೂವಿನ ಮೇಲೆ ಮುನಿಸೇ ಇದ್ದರೂ ಮುಳ್ಳನ್ಯಾರು ಮುಡಿಯುವವರು ಒಂದೇ ಗಿಡದಿ ಹುಟ್ಟಿ ಬೆಳೆದಿದ್ದರೂ ಮುಳ್ಳಿಗೆಲ್ಲಿದೆ ಭಾಗ್ಯ ಮುಡಿಗೇರಲು ತನ್ನಾಯಸ್ಸಿನ ಅಂತ್ಯವ ಅವಳ ಮುಡಿಯಲಿ ಕಳೆವುದೆ ಹೂವಿಗೆ ಮೋಕ್ಷ ಹೂವ ಕಾಯುತಲೆ ಬೆಳೆದ ಮುಳ್ಳಿಗೆ ಅದರೊಂದಿಗಿನ ಒಡನಾಟದಿಯೇ ಮೋಕ್ಷ
----------------------------------
ನೋಂದಣಿ ಐಡಿ : KPFS2-9543