ಕವಿತೆಯೋ ಕವಿಯೋ
ರಚನೆ : ಅರ್ಚನ ಬಿ ಆರ್
----------------------------------
ಒಳಗಿಷ್ಟು ಪದಗಳು. ಅರ್ಥ ಸಹಿತವೋ, ಭಾವಾರ್ಥ, ಭಾವನೆಗಳ ಸ್ಪಷ್ಟ, ಆಸ್ಪಷ್ಟ, ರೂಪ, ಹುಡುಕಾಟ, ಮೋಹದಾಟ, ಮುಸುಕ ಗುದ್ದಾಟ... ಆನಂದಕ್ಕೋ, ಅಳುವುದಕೋ, ಆಗಾಗ ಒಳಗಿನಿಂದ ಹುಟ್ಟುತ್ತಾ ಪದಗಳ ರೂಪಾತಾಳಿ ಹಾಳೆಯಲ್ಲೋ, ಮತ್ತೆಲ್ಲೋ, ಮನದಲ್ಲೋ ಭಾರದ ಇಳಿತ. ಒಂದೊಮ್ಮೆ ಶಾಂತತೆ ಹೃದಯಕ್ಕೆ ತಬ್ಬಿದಾಗಲು, ಇನ್ನೊಮ್ಮೆ ದುಃಖದ ಕಟ್ಟೆ ಒಡೆದು ಅಪ್ಪಳಿಸಿದಾಗಲೊ, ಮತ್ತೊಮ್ಮೆ ಮರುಳು ಹತ್ತಿ ನೆತ್ತಿಗೆರಿದಾಗಲು ಪದಗಳ ಜೋಡಣೆಯಂತೂ ನಿಲ್ಲದ ಧಾರೆ ಇದು ಪದಗಾರನ ಬರಹ.. ಅವನೊಳಗಣ ಭಾವ.. ಇದು ಕವಿತೆಯಾಯಿತೋ, ಅವ ಕವಿಯಾದನೋ.
----------------------------------
ನೋಂದಣಿ ಐಡಿ : KPFS2-9535