Submission 6352

ಅಂದ

ರಚನೆ : ರಮ್ಯ ಕೆ ಬಿ

----------------------------------

ಎಲ್ಲಿದೆ ಅಂದ..? ದೇಹದಲ್ಲ..? ಮನಸಿನಲ್ಲ..? ದೇಹದಲ್ಲಿ ಹುಡುಕುವ ಅಂದ ನಿನ್ನಂಧವ ತೋರುವುದು ಮನಸ್ಸಿನಲ್ಲಿ ಹುಡುಕುವ ಅಂದ ನಿನ್ನ ಮನಸಿನಂದವ ತೋರುವುದು ದೇಹದಂದವ ಹುಡುಕಿ ಮೂಢನಾಗಬೇಡ ಹುಡುಕು ಆ ಮನಸಿನಂದವ ನಿನ್ನ ಮನಸಿನ ಅಂತರಾಳದಿಂದ ಮೂಕನಾಗುವೆ ಆ ಮನಸಿನ ಮಾತಿನಿಂದ ಹುಡುಕಿದ ಮನಸು ಹೇಳುವುದು ನನಗೆ ಅಂದವಿಲ್ಲ ಚಂದವಿಲ್ಲ ನಿನ್ನ ಹಾಗೆ ಬಣ್ಣ ಬದಲಿಸುವ ಮನಸಿಲ್ಲ ಇದ ತಿಳಿದು ಹುಡುಕಬೇಡ ದೇಹದಂದವ ಮೂಢನಾಗುವೆ. ಹುಡುಕು ಮನಸಿನ ನಿಸ್ವಾರ್ಥ ಅಂದವ ಮೂಕನಾಗುವೆ. ಹುಡುಕಬೇಡ ದೇಹದಂದವ ನೀನೂ ಅಂಧನಾಗುವೆ ಹುಡುಕು ಆ ಮನಸಿನಂದವ ನೀನೂ ಆನಂದಗೊಳ್ಳುವೆ.

----------------------------------

ನೋಂದಣಿ ಐಡಿ : KPFS2-9533

0
Votes
72
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top