Submission 6296

ಅವಳಿಲ್ಲದ ತವರು

ರಚನೆ : ಡಾ. ನಿಹಾರಿಕಾ ಟಿ ಜೆ

----------------------------------

ಅಮ್ಮನಿಲ್ಲದ ಗೂಡು,ಮಗಳಿಲ್ಲದ ತವರು, ಸೂತಕ ತುಂಬಿದ ಸೂರು... ಕನ್ನಡವಿಲ್ಲದ ಕರುನಾಡು,ಕನ್ನಡಿಗನಿಲ್ಲದ ನಾಡು, ಪರಕೀಯರ ನೆಲೆಬೀಡು.... ಕನ್ನಡಾಂಬೆಯ ಹೃದಯ ಕಳಶವೇ ಕನ್ನಡ, ಅದನುಂಡ ಚಿರಂಜೀವಿಯೇ ಕನ್ನಡಿಗ... ಅವಳ ಒಡಲ ನೆತ್ತರನೀರಿ, ಕೊಲ್ಲುವ ಯತ್ನವೇಕೆ... ಕಾಯುವ ಕೈಗಳೇ, ಕೈ ಕಟ್ಟಿದರೆ ಹೇಗೆ? ಅಳಿಯುತ್ತಿರುವ ಕನ್ನಡ ಉಳಿಯಲಿ, ಕನ್ನಡಾಂಬೆಯೇ ಕರುನಾಡ ಅಳಲಿ, ಬೇಡ ನಮಗೆ ಮಲತಾಯ ಕೈಸರೆ, ನಮ್ಮಮ್ಮನ ಮಡಿಲೇ ನಮಗೆ ಆಸರೆ... ಅವಳಿಲ್ಲದ ಈ ತವರು, ಅಮ್ಮನಿಲ್ಲದ ಸೂತಕದ ಸೂರು...

----------------------------------

ನೋಂದಣಿ ಐಡಿ : KPFS2-9484

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top