ಒಲವ ಬದುಕು
ರಚನೆ : ದೀಪ ಡಿ.ಎಂ
----------------------------------
ಬಾನಷ್ಟಗಲದ ಬದುಕಿನಲಿ ಬದುಕೆಷ್ಟೇ ಬೇಯಿಸಿದರೂ ತಂಪ ಸೂಸುವ ಚಂದ್ರಮ ನೀನು ಮಿನುಗುವ ನಿನ್ನ ಕಂಗಳಲಿ ಕನಸು ಕಾಣುವವಳು ನಾನು ಕಣ್ಣರೆಪ್ಪೆಯಾಗಿ ಕನಸ ಕಾದು ನನಸು ಮಾಡುವವ ನೀನು ಹೀಗೆ ಮೆಲ್ಲಗೆ ಸಾಗಲಿ ಬದುಕು ಕಣ್ಣಾಗಿ - ಕಣ್ಣ ರೆಪ್ಪೆಯಾಗಿ ನೆರಳಾಗಿ ಒಲವ ತಿರುಳಾಗಿ...
----------------------------------
ನೋಂದಣಿ ಐಡಿ : KPFS2-9446