ಪರಿಸರದ ಹಾನಿ
ರಚನೆ : ಕದಲಗೆರೆ ಜೆ ಜಯರಾಮು
----------------------------------
ಜನರು ಮರ-ಗಿಡಗಳಿಗೆ ಕೊಟ್ಟರು ಕೊಡಲಿ ಪೆಟ್ಟು ಪರಿಸರ ಮಳೆ ಬೀಳಿಸದೆ ಹಿಡಿಯಿತು ಬಿಗಿಪಟ್ಟು ಮರ-ಗಿಡಗಳನ್ನು ಕಡಿದು ಮಾಡಿದರು ಕಾಡು ನಾಶ ಮಳೆ ಬೆಳೆ ಇಲ್ಲದೆ ಆಗುವುದು ಭೂಮಿ ವಿನಾಶ ನಮ್ಮ ಮೇಲೇಕೆ ಪರಿಸರಕ್ಕೆ ಅತಿಯಾದ ಕೋಪ ಭೂಮಿಯಲ್ಲಿ ಹೆಚ್ಚಾಗಿದೆ ಸಹಿಸಲಾಗದ ತಾಪ ವನಗಳ ಸರ್ವನಾಶಕ್ಕೆ ಆಗಿದೆ ಬರಗಾಲದ ಶಾಪ ಮಾಡಿದ್ದಕ್ಕೆ ಅನುಭವಿಸಿ ಇದು ನಮ್ಮಯ ಪಾಪ ಎಲ್ಲದಕ್ಕೂ ಪ್ಲಾಸ್ಟಿಕ್ ಅತಿಯಾಗಿ ಬಳಸಿ ಭೂಮಿಯಲ್ಲಿ ಅಂತರ್ಜಲವೇ ಕುಸಿದಿದೆ ನಶಿಸಿ ನೆಡಿರಿ ಎಲ್ಲರೂ ಸೇರಿ ಅಸಂಖ್ಯಾತ ಗಿಡ ಅವ ಪೋಷಿಸಿದರೆ ತಪ್ಪಿಸಬಹುದು ಅವಘಡ
----------------------------------
ನೋಂದಣಿ ಐಡಿ : KPFS2-9401