Submission 6204

ಅಂತರಂಗ ಶುದ್ಧಿ

ರಚನೆ : ಶೋಭಾರಂಗು ಯಳಂದೂರು

----------------------------------

ಎಲ್ಲೋ ಹುಡುಕ ಹೊರಟಿದೆ ನೆಮ್ಮದಿಯ ಉರೂರು ಅಲೆದರೂ ಸಿಗದಯ್ಯ ಓ ಹುಚ್ಚು ಮನವೇ ನಿನ್ನೊಳಗೆ ಇಹುದಯ್ಯ ಅತ್ತರೆ ನರಕವಯ್ಯ, ನಕ್ಕರೆ ಸ್ವರ್ಗವಯ್ಯ ಪರರ ಚಿಂತೆ ನಿನಗೆ ಏಕಯ್ಯ ನಿನ್ನ ಅಂತರಂಗದ ವಿಮರ್ಶೆ ಮಾಡಯ್ಯ ಅನ್ಯರ ಬಗ್ಗೆ ಆಲೋಚಿಸಿದರೆ ಅದು ನಿನ್ನ ದಡ್ಡತನವಯ್ಯ ನಿನ್ನ ಬಗ್ಗೆ ನೀ ಆಲೋಚಿಸಿದರೆ ಅದು ನಿನ್ನ ದೊಡ್ಡತನವಯ್ಯ ನಕರಾತ್ಮಕ ಯೋಚನೆಯ ದೂರಸರಿಸಯ್ಯ ಕೆಡುಕಿನಲ್ಲಿಯೂ ಒಳಿತನ್ನು ಹುಡುಕಯ್ಯ ಮೌಢ್ಯತೆಯ ಕತ್ತಲನ್ನು ಭೇದಿಸಯ್ಯ ಸನ್ನಡತೆಯ ಬೆಳಕನ್ನು ಪಸರಿಸಯ್ಯ

----------------------------------

ನೋಂದಣಿ ಐಡಿ : KPFS2-9400

0
Votes
101
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top