Submission 6134

ಕನ್ನಡಿ

ರಚನೆ : ಗಂಗಾಧರ.ಪಿ.ಬನ್ನಿಹಟ್ಟಿ

----------------------------------

ತನ್ನನ್ನು ತಾನು ಮರೆಮಾಚಿಕೊಳ್ಳುವವರ ಲೋಕದಲ್ಲಿ ನನ್ನನ್ನು ನನಗೆ ನಾನಿದ್ದಂತೆ ಬಿಂಬಿಸುವ ವಿದ್ಯೆಯಲ್ಲಿ ಇದ್ದದ್ದ ಇದ್ದಂತೆ ತೋರಿಸುವ ನಿನಗೆ ಬೇಕೇನು ಮುನ್ನುಡಿ ನಿನ್ನಂತೆ ನಮಗೂ ಪಾರದರ್ಶಕತೆ ಕಲಿಸಿಕೊಡಬಾರದೇ ಓ..! ಕನ್ನಡಿ ಒಡೆಯದಿರೆ ಸಂಬಂಧ ಬಂಧಗಳು ನಿನ್ನಂತೆಯೇ ನುಣುಪು ಒಡೆದ ಮನಸ್ಸುಗಳು ಓ...! ಕನ್ನಡಿ, ನಿನಗಿಂತಲೂ ಬಿರುಕು ನಾಜೂಕಿನ ಲೋಕದಲ್ಲಿ ನಿನ್ನಂತಿರುವುದೇ ನಿಜ ಬದುಕು ಕಲಿಸಿಕೊಡು ಆ ಸೂಕ್ಷ್ಮತೆಯ ನಿನ್ನಂತೆ ನನಗೂ ಬಣ್ಣಗಳ ಗಾತ್ರಗಳ, ಗಂಡುಹೆಣ್ಣುಗಳ ಬೇದವಿಲ್ಲ ನಿನಗೆ ಕನ್ನಡೀ...!ಕಾಣುವ ಕಾತುರದಿ ನಿಲ್ಲುವರು ನಿನ್ನೆದುರಿಗೆ ಎದುರು ನಿಂತರೇ ಅವರನ್ನೇ ತೋರಿಸುವೆ ಅವರಿಗೆ ಆ ಜಾಣ್ಮೆಯ ನಿನ್ನಂತೆ ಹೇಳಿಕೊಡು ನನಗೆ

----------------------------------

ನೋಂದಣಿ ಐಡಿ : KPFS2-9348

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top