Submission 6132

ಕೃಷಿಕನ ಪಾಡು

ರಚನೆ : ದಯಾನಂದ .ಟಿ.ಎಸ್

----------------------------------

ಕಾಲವೊಂದಿತ್ತು ಕೃಷಿಯೇ ಜೀವನವೆಂದು ಕಾಲವೊಂದುoಟು ಕೃಷಿಯೇ ಸಾಯಲೆತ್ನಿಸಲು ದಾರಿಯೆಂದು ಕೃಷಿಕನಿಗೆ ನೂರೆಂಟು ವಿಘ್ನಗಳು ,ಮಳೆಯ ಹುಚ್ಚಾಟ, ಬಿಸಿಲಿನ ರಂಪಾಟ,ಕಾಡು ಪ್ರಾಣಿಗಳು ಲೂಟಿಯ ಕಾಟ. ಬೆಳೆಯುವ ಬೆಳೆಗೆ ಕಾಡು ಮಂಗಗಳ ಕಾಟ ಬೆಳೆದ ಬೆಳೆಗೆ ದಲ್ಲಾಲಿಗಳೆಂಬ ಮನುಷ್ಯ ಮಂಗಗಳ ಕಾಟ ಇರುವ ಚೂರುಪಾರು ಜಮೀನಿಗೆ ರಾಜಕಾರಣಿಗಳ ಅಭಿವೃದ್ಧಿಯ ಕಾಟ ಪೇಟೆಯ ಹಣದ ಎದುರು ಕೃಷಿಕನ ಹರಿದ ಬಟ್ಟೆ, ಬಡಕಲು ಜೀವ ನೋಡಿ ಹಳ್ಳಿಯ ಹೆಣ್ಣುಮಕ್ಕಳಿಗೂ ಕೂಡ ಕೃಷಿಕನನ್ನು ಮದುವೆಯಾಗಲು ತಾತ್ಸಾರ . ಮದುವೆ ಇಲ್ಲದ ಗಂಡು , ಗಡ್ಡ ಬಿಟ್ಟು ಸನ್ಯಾಸಿಯಂತೆ ತಿರುಗುತ್ತಿರಲು, ಪೇಟೆ ಸೇರಿ ದುಡ್ಡು ಮಾಡಿದ ಅಣ್ಣನೋ, ತಮ್ಮನೋ, ತಂಗಿಯೋ ಜಮೀನು ಕಿತ್ತುಕೊಂಡರೆ ಪರದೇಶಿಯಾಗುವನು ಈ ನನ್ನ ದೇಶಕ್ಕೆ ಅನ್ನ ಕೊಡುವ ರೈತ,.

----------------------------------

ನೋಂದಣಿ ಐಡಿ : KPFS2-9347

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top