Submission 6124

ಚಿಂತಿ

ರಚನೆ : ಲಕ್ಷ್ಮೀಕಾಂತ ಜೆ. ತಮ್ಮನೋರ್

----------------------------------

ಚಿಂತಿ ಮ್ಯಾಲೊಂದು ಚಿಂತಿ | ಅಲ್ಲಿ ನೋಡು ಚಿಂತಿಯ ಸಂತಿ | ಊರಾನ ಮನ್ಯಾಗ ನೂರಾರು ಚಿಂತಿ | ಚಿಂತಿ ಇಲ್ಲದ ಮನಿ ಯಾವುದಂತಿ | ಹುಟ್ಟಿನ ತಟ್ಟಾಗ ಸಾವಿನ ಅನ್ನ ಬೀಳೊ ತನಕ ಚಿಂತಿ | ಬದುಕ ಬಾನಾ ಬೇಯೊತನಕ ಕೇಳಗ ಉರಿಹಚ್ಚ ಚಿಂತಿ ಅಡಗಿಯ ಮನ್ಯಾಗ ಗಡಗಿಯ ಚಿಂತಿ । ರೊಟ್ಟಿಯ ಕಲ್ಲಿಗಿ ಹಿಟ್ಟಿನ ಚಿಂತಿ ॥ ಗೌಡರ ಮನ್ಯಾಗ ಆಳಿನ ಚಿಂತಿ | ಅದೇ ಆಳಿನ ಮನ್ಯಾಗ ಒಂದು ತುತ್ತು ಕೂಳಿನ ಚಿಂತಿ | ಚೆನ್ನನ ಬಾಳಿಗಿ ಚಿನ್ನದ ಚಿಂತಿ | ಹಾಳಾದ ಬಾಳಿಗಿ ಹಾಳಬಾವಿ ಚಿಂತಿ ॥ ಕತ್ತಲಿಗಿ ನಾಳಿ ಬೆಳಕಿನ ಚಿಂತಿ | ಈ ಹಾಳಾದ ಕತ್ತಲಾಗ ನೀ ಯಾಕ ಕುಂತಿ |

----------------------------------

ನೋಂದಣಿ ಐಡಿ : KPFS2-9342

0
Votes
93
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top