ಯಾಕೆ ?
ರಚನೆ : ಕೆ. ಭಾಸ್ಕರ ಹೆಬ್ಬಾರ
----------------------------------
ನನ್ನದೇ ರೆಕ್ಕೆ, ಯಾರದ್ದೂ ಅಲ್ಲದ ಆಕಾಶ ಹಾರಲೇಕೆ ಯಾರದೋ ಅಪ್ಪಣೆ ನಾನು ಹಕ್ಕಿ ನನ್ನದೇ ಕೌಶಲ್ಯ, ಯಾರದ್ದೂ ಅಲ್ಲದ ಕಾಡು ಗೂಡುಕಟ್ಟಲೇಕೆ ಯಾರದೋ ಅಪ್ಪಣೆ ನಾನು ಹಕ್ಕಿ ನನ್ನದೇ ಆಹಾರ, ಯಾರದ್ದೂ ಅಲ್ಲದ ನದಿ ಮೀನು ಹಿಡಿಯಲೇಕೆ ಯಾರದೋ ಅಪ್ಪಣೆ ನಾನು ಹಕ್ಕಿ ನನ್ನದೇ ದೃಷ್ಟಿ, ಯಾರದ್ದೂ ಅಲ್ಲದ ಪರ್ವತ ಗಿರಿ ವಿಹಂಗಮ ನೋಟಕೇಕೆ ಯಾರದೋ ಅಪ್ಪಣೆ ನಾನು ಹಕ್ಕಿ ನನ್ನದೇ ಯಾನ, ಯಾರ ಹಂಗೂ ಇಲ್ಲದ ಗಡಿ ವಲಸೆ ಹೋಗಲೇಕೆ ಯಾರದೋ ಅಪ್ಪಣೆ ನಾನು ಹಕ್ಕಿ
----------------------------------
ನೋಂದಣಿ ಐಡಿ : KPFS2-9325