Submission 6078

ತೊಟ್ಟಿಲು ತೂಗುವ ಕೈ ಜಗವನ್ನೇ ಆಳಿತು

ರಚನೆ : ಅಕ್ಷತಾ ಸಿ ಗೌಡ

----------------------------------

ಹೂವಿನಂತೆ ನುಡಿಯುತ್ತಿದ್ದಳು, ಮನದಲ್ಲಿ ಬೆಂಕಿ ಹೊತ್ತಿತ್ತು. ಮೌನದೊಳಗೇ ನಲಿದಳು, ಕನಸೊಂದು ಅವಳ ಕರೆದಿತ್ತು ; ಬೇಸರ ಬಂದರೂ ನಿಂತಳು, ಹೆಜ್ಜೆಗೆ ಧೈರ್ಯ ತುಂಬಿತ್ತು ಎದುರು ಬಂದ ಬಿರುಗಾಳಿಗೂ, ಮನದ ಬಲವೇ ಉತ್ತರಿತ್ತು. ದಾರಿ ಕಠಿಣವಾಗಿದ್ದರೂ, ಅವಳ ನೋಟ ಕಠಿಣವಾಗಿರಲಿಲ್ಲ. "ನಾನು ಸಾಧಿಸುವೆ"ಎಂಬ ನಂಬಿಕೆ ಕಡಿಮೆಯಾಗಲಿಲ್ಲ; ಅಸಾಧ್ಯವೆಂಬ ಮಾತು ಅವಳ ಮುಂದೆ ನಾಚಿಕೊಂಡಿತು ಧೈರ್ಯದ ರೆಕ್ಕೆಗಳನ್ನು ಹೊದ್ದು, ಕನಸಿನ ಗಗನ ತಾಕಿತು. ಹೆಣ್ಣು ಎಂದರೆ ದುರ್ಬಲವೆಂಬ ಮಾತು ಇವಳು ಒಡೆದಳು ತನ್ನಜಯದ ಬೆಳಕಿನಿಂದ ಜಗವನ್ನೇ ಮರುಕಳಿಸಿದಳು ; ತಾಳ್ಮೆ, ಶಕ್ತಿ, ನಂಬಿಕೆಯೇ ಇವಳ ನಿಜವಾದ ಆಭರಣ ಇವಳು ಬಂದರೆ ಬದಲಾವಣೆ, ಇವಳು ಹೆಣ್ಣಿನ ಹೊಸ ಚರಣ

----------------------------------

ನೋಂದಣಿ ಐಡಿ : KPFS2-9307

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top