ಗಡಿ ದಾಟದ ಮಾತು
ರಚನೆ : ಡಾಕೇಶ್ ತಾಳಗುಂದ, ಶಿಕಾರಿಪುರ
----------------------------------
ಅವಳ ಬಾಯಬ್ಬರಕೆ ಕೇರಿಗೆ ಕೇರಿಯೇ ಮೌನ. ಅವಳೆದೆಯ ಮೇಲೆ ಪರನೊಬ್ಬನ ವಸಾಹತು! ಜಾರಿದ ಸೀರೆಗೆ ಮಡಿಯೇ, ತೋಳತೆಕ್ಕೆಯ ಬಿಸಿಯುಸಿರಿಗೆ! ತೊಡೆಗೆ ತೊಡೆ ತಡವರಿಸಿ ಸಾಂತ್ವನ ಹೇಳುತಿದೆ ಬೆರಸಿ. ಅದೆಷ್ಟೋ ಕನಸುಗಳು ಬೆದರಿ ಬೆನ್ನತ್ತಿ ಬಡವಾದವು. ಮಾಯೆಯ ಮೋಹಕ್ಕೆ ಸಿಲುಕಿದೆಷ್ಟೋ ಸಂಸಾರಗಳು ತಲೆದಂಡವಾಗಿ ಬೆಲೆತೆತ್ತಿವೆ! ಕೇರಿಯ ಹಿಡಿ ಶಾಪ ಆಕೆಗೆ ಒಂದಿನಿತು ತಾಗಲಿಲ್ಲ! ಗೋಡೆ ಗೋಡೆಯ ಮಾತು ಗೋಡೆಯಾಚೆಯ ಗಡಿ ದಾಟಲಿಲ್ಲ! ಎದೆ ಬಾಗದವಳ ನಡೆಗೆ ಬಾಗಿತೆ ಮನೆಯೊಳಗಣ ದಿಕ್ಕು! ಬಿಕ್ಕಿದ ಭಾವಕ್ಕುಂಟೇ ನಿಟ್ಟುಸಿರ ಪರಿತಾಪದ ಶಾಪ!
----------------------------------
ನೋಂದಣಿ ಐಡಿ : KPFS2-9304