ತೊದಲು ನುಡಿ
ರಚನೆ : ನಯನ
----------------------------------
ನಿನ್ನ ತೊಟ್ಟಿಲೊಳಗೆ ಚಂದಮಾಮನ ಇರಿಸಿ ಪುಟ್ಟ ಕಾಲಿಗೆ ಬೆಳ್ಳಿ ಚುಕ್ಕಿಗಳ ಪೋಣಿಸಿ ಹಗಲುರುಳಿತು ಹೇಗೆ? ನೇಸರನ ಮಲಗಿಸಿ ಹಾಯಾಗಿ ನಿದ್ರಿಸು ಲಾಲಿ ಹಾಡ ಆಲಿಸಿ ಆದಿಶೇಷ ಹಾಸಿಗೆ ಕ್ಷೀರ ಸಾಗರದಲಿ ಆದರೂ ಅವತರಿಸಿದ ಭಗವಂತ ಭುವಿಯಲಿ ಕೃಷ್ಣನಾಗಿ ಮಲಗಿದ ಯಶೋದೆ ಮಡಿಲಲಿ ಸಂಭ್ರಮವು ತುಂಬಿದೆ ನಂದ ಗೋಕುಲದಲಿ ಗುಬ್ಬಿಮರಿ ಮಲಗಿದೆ ಗೂಡಲ್ಲಿ ಬೆಚ್ಚಗೆ ಲಾಲಿಯ ಹಾಡುತಿದೆ ತಂಗಾಳಿ ಮೆಲ್ಲಗೆ ಸದ್ದಿಲ್ಲದೆ ಅರಳಿದೆ ಆಕಾಶ ಮಲ್ಲಿಗೆ ಸವಿಗನಸಾವರಿಸಲಿ ದಣಿದಿರೊ ರೆಪ್ಪೆಗೆ
----------------------------------
ನೋಂದಣಿ ಐಡಿ : KPFS2-9295