ನೀ ನನ್ನ ಅಗಲಿದ ಮೇಲೆ
ರಚನೆ : ಕ್ಷಿತಿಜ್ ಅಂಗಡಿ
----------------------------------
ಬಿಟ್ಟು ಹೋಗಿರುವೆ ಎಲ್ಲಿಗೆ ನೀನು ನನ್ನ, ಇದೇ ಪ್ರಶ್ನೆಯಾಗಿ ಉಳಿದಿದೆ ಮನದೊಳಗೆ ನನ್ನ, ಒಬ್ಬಂಟಿಯಾಗಿರುವೆ ನಾ ಈ ಜಗದಲಿ ಬಿಟ್ಟು ನಿನ್ನ. ಉತ್ತರ ಬೇಕಿವೆ ಹಲವು ಪ್ರಶ್ನೆಗಳಿಗೆ ನಿನ್ನಿಂದ, ಆದರೆ ದೂರವಾಗಿರುವೆ ನೀನು ಈ ಭೌತಿಕ ಜಗತ್ತಿನಿಂದ, ಉಳಿದಿರುವೆ ನಾನಿಲ್ಲಿ ನಿನ್ನೊoದಿಗಿನ ಸಿಹಿ ನೆನಪುಗಳ ಆಸರೆಯಿಂದ. ನಡೆಯುತಿಹುದು ರಾಜಕೀಯ ಜೀವನದ ಪ್ರತಿಕ್ಷಣದಲಿ! ಬಿಟ್ಟು ಹೋದೆ ಏತಕೆ ನನ್ನ ನೀನಿಲ್ಲಿ? ಅಸಹಾಯಕನಾಗಿರುವೆ ನಾ ನೀನಿರದ ಈ ಜಗದಲಿ. ಬಂದರು ಹಲವರು ನೀ ನನ್ನ ಅಗಲಿದ ಮೇಲೆ, ಆದರೆ ಚಿರಕಾಲದ ವರೆಗೆ ಉಳಿವರೆ ಅವರು ನನ್ನ ಜೊತೆಗೆ? ಉತ್ತರಕ್ಕಾಗಿ ಕಾಯಲೇಬೇಕಲ್ಲ ನಾ ಜೀವನದ ಕೊನೆವರೆಗೆ!
----------------------------------
ನೋಂದಣಿ ಐಡಿ : KPFS2-9268