Submission 5946

ಕಲಿಗಾಲ

ರಚನೆ : ಶ್ರೀಹರಿ ಕುಲಕರ್ಣಿ

----------------------------------

ಬಹುಕ್ರೂರಿ ಕಲಿಗಾಲ ವರ್ಣಿಸಿದಕಿಂತ ಹಣಸಿರಿಯೇ ಹೆಚ್ಚಾಯ್ತು ಮಾನವನಿಗಿಂತ || ಪ್ರೀತಿ - ಮಮತೆಗಳಿಲ್ಲ, ಕರುಣೆ - ವಾತ್ಸಲ್ಯಗಳಿಲ್ಲ ದ್ವೇಷದ ಹಗೆಕಿಚ್ಚೇ ಹೆಚ್ಚಾಯಿತೀಗ ದಟ್ಟ ಕಾಡನು ಸುಡುವ ಕಾಡ್ಗಿಚ್ಚಿಗಿಂತ |೧| ಧರ್ಮ- ಅಧರ್ಮಗಳಿಲ್ಲ, ಸತ್ಯ- ಅಸತ್ಯಗಳಿಲ್ಲ ಹೊಳೆವ ಕೊಳೆಯ ಬೆಲೆಯೇ ಹೆಚ್ಚಾಯಿತೀಗ ಕೊಳೆಯ ತೊಳೆವ ಮಳೆಯ ಧಾರೆಗಿಂತ |೨| ಸ್ನೇಹ - ಸಂಬಂಧಗಳಿಲ್ಲ, ಅಸೂಯೆ - ಅಹಂಕಾರಗಳೇ ಎಲ್ಲ ಸ್ವಾರ್ಥದ ನದಿಯದೇ ಅಬ್ಬರವು ಈಗ ನಿಸ್ವಾರ್ಥ ಪರೋಪಕಾರಗಳ ಕಡಲ ಅಲೆಗಿಂತ |೩| ಭಾವನೆಗೆ ಬೆಲೆಯಿಲ್ಲ, ಹೊನ್ನು- ಮಣ್ಣುಗಳೇ ಎಲ್ಲ ಸುಳ್ಳು ನೀಡುವ ನಗುವೇ ಇಂಪಾಯಿತೀಗ ಸತ್ಯ ತೋರುವ ಕಠೋರ ವಾಸ್ತವಕ್ಕಿಂತ |೪|

----------------------------------

ನೋಂದಣಿ ಐಡಿ : KPFS2-9198

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top