Submission 5938

ಐಕ್ಯತೆ

ರಚನೆ : ಸದಾಶಿವ ಬಡಿಗೇರ

----------------------------------

ಉರಿವ ಹಣತೆ ಯಾವುದಾದರೇನು? ಕತ್ತಲೆ ಕಳೆಯುವ ಜ್ಯೋತಿ ಒಂದೆಯೇ! ಉಲಿವ ಭಾಷೆ ಯಾವುದಾದರೇನು? ಎದೆಯ ಭಾವ ಒಂದೆಯೇ? ನೂರು ಬಣ್ಣ ನೂರು ಕಂಪು ಇದ್ದರೂ ಅನ್ನ ನೀಡುವ ಮಣ್ಣು ಒಂದೆಯೇ! ಎಲ್ಲ ಜೀವಿಗಳಿಗೂ ತೃಷೆಯ ತಣಿಸಿ ಸಲಿಲವಾಗಿ ಹರಿಯುವ ಜಲವು ಒಂದೆಯೇ! ಹಲವು ಜಾತಿ ಮತ ಪಂಥಗಳ ಭೇದವಿದ್ದರೂ ಕರುಣೆಯಿಂದ ಕಾಯ್ವ ದೈವ ಒಂದೆಯೇ! ಸಾವಿರಾರು ರಾಗ ತಾಳ ಮೇಳವಿದ್ದರೂ ಹೃದಯ ವೀಣೆ ನುಡಿಸುವ ಲಯವು ಒಂದೆಯೇ!

----------------------------------

ನೋಂದಣಿ ಐಡಿ : KPFS2-9193

2
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top