ಸೋತು ನಿಂತವಳು
ರಚನೆ : ದ್ರಾಕ್ಷಾಯಣಿ ಮುರುಗನ್
----------------------------------
ಕವಿದ ಕಾವಳದೊಳಗೆ ಬೆಳಕ ತಾವೆಲ್ಲಿ ಸೋತು ನಿಂತವಳ ಬದುಕಲ್ಲಿ ನಗುವೆಲ್ಲಿ ಬಾಳಿನ ಭವಣೆಯಲ್ಲಿ ಬೆಂದು ನೊಂದಿಹೆನಿಲ್ಲಿ ಕಷ್ಟಗಳ ಮಳೆಯಲ್ಲಿ ತೋಯ್ದಿರುವೆನಿಲ್ಲಿ ನನ್ನಿನಿಯನ ಪ್ರೇಮದಾ ಸಿಂಚನವು ಇಂದಲ್ಲ ನಾಳೆ ಸಿಗುವುದೆಂಬ ಹಂಬಲವು ಕಾಯುತಾ ದಾರಿಯ ಸವೆಸುತಿರುವೆನು ಆಸೆಯಾ ಸೆಳೆತದಿಂದ ಉಸಿರಾಡುತಿರುವೆನು ಸುಳ್ಳಿನ ತೆರೆಯದು ಸರಿದು ಬಿಡಲಿ ಸತ್ಯದ ಅರಿವು ನಿನಗೆ ಆಗಿ ಬಿಡಲಿ ಅಂಧ ಪ್ರೀತ್ಕಿಯ ಕುರುಡು ಸರಿದು ಬಿಡಲಿ ಒಲವು ಮೂಡಿ ಸುಧೆಯು ಹರಿದು ಬಿಡಲಿ
----------------------------------
ನೋಂದಣಿ ಐಡಿ : KPFS2-9191