ಕನ್ನಡದ ಕವಿತೆ
ರಚನೆ : ಸಚಿನ್ ಮುಂಗಿಲ
----------------------------------
ಕನ್ನಡದ ಕವಿತೆಯನು ಬರೆಯುವೆನು ಚಿನ್ನ ಮನ್ನಣೆಯ ಗಳಿಸುವೆನು ಕವಿಬಳಗದೊಳೆನ್ನ ! ಸನ್ನಡತೆ ಗುಣವರಸಿ ದಿಟವರಸಿ ಮುನ್ನ ಎನ್ನೊಡೆಯನೆಲ್ಲಿರುವೆ ಕೈಹಿಡಿಯೊ ನನ್ನ || ಭಾಮಿನಿಯ ರಗಳೆಗಳನೋದಿದೆನು ನಿತ್ಯ ಶ್ಯಾಮನಿಗೆ ಸೇರುವುದು ನವನೀತ ಸತ್ಯ! | ತಾಮಸವ ಪರಿಹರಿಸೊ ಕಾವ್ಯದೊಳು ಮಿಥ್ಯ ನೀಮನಸಿನೊಳಗೆನ್ನ ತಂದಿರಿಸು ತಥ್ಯ! || ಕಂದ ಸಾಂಗತ್ಯಗಳ ಬರೆವವರು ಯಾರಿಹರು? ಬಂದ ಪಾಂಡಿತ್ಯಗಳ ಬರೆಬರೆದು ಹಾಕು! ಚಂದ ದಾಂಪತ್ಯಗಳ ನೀಮಾಡು ಛಂದದೊಳು ಮಂದ ಬುದ್ಧಿಯ ತೊರೆದು ನೀಬರೆಯೊ ಸಾಕು! || ಸಾವಿರದ ಚರಿತೆಯನು ನೀ ತೆಗೆಯೆ ಮುಂದೆ ಸಾವಿರದು ಕನ್ನಡದ ಭವಿತವ್ಯ ಮುಂದೆ! ||
----------------------------------
ನೋಂದಣಿ ಐಡಿ : KPFS2-9181