Submission 5894

ಹಗುರಾಗು ಓ ಮನವೆ

ರಚನೆ : ಕೀರ್ತಿರಾಜ್ ಇ

----------------------------------

ಹಗುರಾಗು ಓ ಮನವೆ ತೊರೆದೆಲ್ಲವನು ಮರೆತು ಕೊರೆವ ಆ ಎಲ್ಲ ದುಗುಡಗಳನು ಬಂದಂತೆ ಅನುಭವಿಸು ಬದುಕಲ್ಲಿ ಅವತರಿಸು ಆರ್ಭಟಿಸಿ ಹಾತೊರೆದು ಬಿಗುಮಾನ ಸರಿಸು ಎಲ್ಲ ದೇವರ ಇಚ್ಛೆ ನಮ್ಮದೇನಿದೆ ಇಷ್ಟೆ ಇಲ್ಲದಿರುವುದನು ನೆನೆ ನೆನೆದು ಮರುಗಿದೆವು ಅಷ್ಟೆ ಸ್ವೀಕರಿಸು ಬಂದಂತೆ ಸಹಕರಿಸು ಸಿಕ್ಕಂತೆ ಸಿದ್ಧವಾಗಿದೆ ಎಲ್ಲ ನಡೆ ಮರೆತು ಚಿಂತೆ ಕೇಳಿ ಪಡೆದುದಕಿಂತ ಹಾಗೆ ದೊರೆತದೆ ಹೆಚ್ಚು ಇನ್ನು ಬಯಸುತಿದೆ ಮನವು ಸಾಕು ಈ ಹುಚ್ಚು ನಮ್ಮದಲ್ಲದ ವಸ್ತು ಸಿಕ್ಕುವುದು ಹೇಗೆ ಬದುಕೆಲ್ಲವು ಬವಣೆ ನಡೆಯುವುದೆ ಹೀಗೆ ಕೆಳಗಿಳಿಸು ಭಾರಗಳ ತೂಕವಿಲ್ಲವೊ ಅದಕೆ ನಳನಳಿಸಿ ಅರಳಲಿ ಮುಖವು ತೊರೆದು ನಿನ್ನಯ ಬಯಕೆ

----------------------------------

ನೋಂದಣಿ ಐಡಿ : KPFS2-9163

0
Votes
122
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top