ನೊಂದವಳು
ರಚನೆ : ಹೇಮಂತ್ ಬಿ ಶಿವಾನ್
----------------------------------
ಆಕೆ ಮೋಸಗಾತಿಯಲ್ಲ, ಅವನ ಜಾಣ್ಮೆಯಾಟದಲಿ ಪ್ರೀತಿಯ ಸೋಲುಂಡವಳು ವರುಷಗಳ ಪ್ರೀತಿಯ ಕೂಸಿಗೆ ಭವಿಷ್ಯದ ಕನಸ ಕಂಡವಳು ಅದೆಷ್ಟೋ ಹಗಲುಗನಸಿಗೆ ಬಟ್ಟೆ ತೊಡಿಸಿದವಳು ಪ್ರಾರ್ಥನೆಯ ಮೊದಲೇ ಅವನ ಹೆಸರ ನೆನೆದವಳು ಅವನ ಮೋಸದ ಪ್ರೀತಿಗೆ ಹೆಚ್ಚಿಗೆ ಇಟ್ಟ ಹೂಗಳಿಗೆಲ್ಲ ತೆರಿಗೆ ಕಟ್ಟುತ್ತಿರುವವಳು ಅವನ ನಿರ್ಲಕ್ಷತೆಯ ನೆರಳೆ ಸೋಕದವಳು ಮೆಚ್ಚಿದವನಿಗಾಗಿ ಈಗಲೂ ನರಳುತ್ತಿರುವವಳು ಆಕೆ ಕುರೂಪಿಯೇನಲ್ಲ ಸೌಂದರ್ಯದಲ್ಲಿ ಕೊರತೆಯೂ ಇಲ್ಲ ತಾಳ್ಮೆಯಲ್ಲಿ ಶಬರಿಯ ದಾರಿಯನ್ನೇ ಹಿಡಿದವಳು ಆದರೆ ಅವನ ನಿರಾಕರಣೆಯ ಕಾಲ್ತುಳಿತಕ್ಕೆ ಸಿಲುಕಿ ಆ ರಕ್ಷಕನಿಂದಲೇ ಪ್ರೀತಿಯ ಕೊನೆಯುಸಿರೆಳೆದವಳು.
----------------------------------
ನೋಂದಣಿ ಐಡಿ : KPFS2-9161