Submission 5886

ಕಡಲೊಡಲ ಉಸಿರು

ರಚನೆ : ಸೀಮಾ ಸತೀಶ್ ಭಟ್

----------------------------------

ಕಡಲೊಡಲ ಸೇರಿದಾ ತೆರೆಯ ಬಾಚಿ ತಬ್ಬಲು ಹಂಬಲಿಸಿ ಮಗಿಲು ಕಾದು ಕುಳಿತಿರಲು ತೀರವೋ ಮುಗಿಲೋ ಎಂಬ ಗೊಂದಲದಲಿ ತೆರೆಯು ಮುಳುಗಿರಲು ಕಡಲು ತನ್ನೊಡಲ ಕಂದನಾ ಬಾಚಿ ತಬ್ಬಿ ಉಸುರಿತ್ತು ನಿನ್ನಯ ಹಾದಿಯು ಎಂದಿಗೂ ತೀರದೆಡೆ ಮುಗಿಲಿಗಾದರೋ ಹಲವಾರು ದಾರಿಯಿದೆ ತೀರಕಾದರೂ ಯಾರಿಹರು ನಿನ್ನ ಹೊರತು ಹಂಬಲಿಸುತಿದೆ ನಿನ್ನನೇ ಹುಟ್ಟಿದಾ ದಿನದಿಂದ ಹೋಗದಿರು ಮಗಿಲ ಮಾಯೆಯಲಿ ಕಳೆದು, ಬಿಸಿ ಅಪ್ಪುಗೆಯ ಬಣ್ಣವು ಮಾಸುವಾ ಮುನ್ನ ಹಿಂದಿರುಗಿ ನೋಡದೇ ಮುಗಿಲಕಡೆಗೆಂದೆ ಹೋಗಿ ಸೇರಿಕೊ ತೀರದೂರಿಗಿಂದೆ.

----------------------------------

ನೋಂದಣಿ ಐಡಿ : KPFS2-9153

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top