Submission 5854

ಮನಸ್ಸು ಮತ್ತು ನೀನು

ರಚನೆ : ಗಿರಿಕುಮಾರ

----------------------------------

ಖಾಲಿ ಇತ್ತು ಮನವು ನಿನ್ನ ನೋಡುವವರೆಗೂ ತುಂಬಿ ಹೋಯಿತು ನಿನ್ನ ನೋಡಿದ ಅರೆ ಕ್ಷಣವು... ಹಗುರವಾದ ತಳಮಳ ತಿಳಿಯದ ಮನವು ಆಗಿ ಹೋಯ್ತು ತೀವ್ರ ಚಟುವಟಿಕೆಯ ಬಯಲು... ಚಡಪಡಿಸಿತು ನಿನ್ನನ್ನು ಆಕರ್ಷಿಸಿ, ಅಂತರಂಗದ ವೇದನೆ ನಿವೇದಿಸಲು ಅದ ತಿಳಿದು ನೀ ಒಪ್ಪಿಗೆ ಕೊಟ್ಟ ಕ್ಷಣವೇ ಹಗುರಾಯಿತು ಎಲ್ಲಾ ದಿಗಿಲು.... ಇನ್ನಷ್ಟೇ ಆರಂಭವಾಯಿತು ಕಾಯಕ ನಿನ್ನನ್ನು ನಗಿಸಲು ಸಾಲದಾಯಿತು ಪ್ರತಿ ಕ್ಷಣ, ದಿನ ತಿಂಗಳುಗಳ ಹಗಲು... ನನ್ನ ಕಾಣುತ್ತಿದ್ದುದು ನಿನ್ನಲ್ಲೇ ನಿನ್ನ ನಗುವ ನೋಡಿ ನಿನಗಂತ ಒಪ್ಪಿಸಿದ ಒಲವ ನೀ ಅಪ್ಪಿಕೊಂಡ ಪರಿಯ ನೋಡಿ.. ಒಲವಿನ ಜೀವನದ ಗೆಲುವು ನೀ ಜೊತೆಗೆ ಇದ್ದರೆ ಮನವು ಹೂವ ಬಯಲು ನೀ ಸದಾ ನನ್ನಿಂದ ನಗುತ್ತಿದ್ದರೆ...

----------------------------------

ನೋಂದಣಿ ಐಡಿ : KPFS2-9125

0
Votes
117
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top