ನನ್ನ ಬಾಲ್ಯದ ಶಾಲೆ
ರಚನೆ : ಮಲ್ಲಿಕಾರ್ಜುನ್
----------------------------------
ಅದುವೇ ಎಷ್ಟೋ ಚೆನ್ನಾಗಿತ್ತು, ಬಾಲ್ಯದ ಗೆಳೆಯರ ಗೂಡು ಒಡಗೂಡಿತ್ತು, ತಿಳಿಯದೆ ಓಡುತಿದ್ದ ದಿನ—ಸ್ವರ್ಗವೇ ಹರಡಿಕೊಂಡಿತ್ತು. ಗುರುವಿನ ನೋಟವೇ ಆಶೀರ್ವಾದವಾಗಿತ್ತು, ಬಾಳಿನ ಹಾದಿಯನ್ನೇ ಸತ್ಯದ ಬೆಳಕು ತೊಡಗಿಸಿತ್ತು, ಆ ಪಾಠಗಳ ಜ್ಯೋತಿಯಲ್ಲಿ ಜಗತ್ತೇ ಅಡಗಿತ್ತು ಜಾತಿ–ಧರ್ಮಗಳನ್ನು ತೊರೆದ ಸ್ವಚ್ಛ ಜಗವಾಗಿತ್ತು, ಇವೆಲ್ಲವ ತಿಳಿಯಲು ಸಮಯವೇ ಇಲ್ಲದಾಗಿತ್ತು, ಸಿಕ್ಕ ಸಮಯವೆಲ್ಲಾ ಆಟೋಟದಲ್ಲಿ . ಹರಿದೋಗುತಿತ್ತು ಸ್ನೇಹದ ಹಗ್ಗವೊಂದು ಹೃದಯಗಳಿಗೆ ಮೃದುವಾಗಿ ಜೋಡಿಸಿತ್ತು, ನಗು–ನಲಿವಿನ ಮಳೆಬಿಲ್ಲಿನಲ್ಲಿ ಕಾಲವೇ ನಿಷ್ಕಳಂಕವಾಗಿತ್ತು, ಇವೆಲ್ಲವ ತುಂಬಿದ ದೇವಾಲಯ—ನಮ್ಮ ಶಾಲೆಯಾಗಿತ್ತು.
----------------------------------
ನೋಂದಣಿ ಐಡಿ : KPFS2-9123