Submission 5832

ಕಸ್ತೂರಿ ಕನ್ನಡ

ರಚನೆ : ಕಸ್ತೂರಿ ಜಯರಾಮ್

----------------------------------

ಕನ್ನಡಾಂಬೆಗೆ ಅಕ್ಷರ ಪ್ರಣತಿಯ ಆರತಿ ಭುವನೇಶ್ವರಿಗೆ ಕವಿತೆಯ ಪದಗಳ ಸ್ತುತಿ ಕಸ್ತೂರಿ ಕನ್ನಡ ಜಗದಗಲ ಘಮಘಮಿಸಿದ ಕೀರುತಿ ಸಾಹಿತ್ಯ ಕಲೆಗಳಲ್ಲಿ ಆಧ್ಯಾತ್ಮಿಕತೆ ಅರಳಿಸಿದ ಸಂಸ್ಕೃತಿ ಅಮ್ಮನ ಕೂಗಳತೆಯಲಿ ಮಿಂದ ಕನ್ನಡನಾಡು ಅಪ್ಪನ ಹೆಗಲೇರಿ ಅರಿವಿನ ದೀಪ್ತಿ ಬೆಳಗಿದ ಕರುನಾಡು ನಲಿ ಕಲಿ ಪಾಠವ ಕಲಿತು ಕನ್ನಡಿಗವೆನ್ನುವ ಹೆಮ್ಮೆಯ ಸೂಡು ಭ್ರಾತೃತ್ವ ಭಾವನೆ ಪೋಣಿಸಿದ ಅನನ್ಯತೆಯ ಬೀಡು ಹಳದಿ ಕೆಂಪು ಬಾವುಟ ಪಿಡಿದ ಭುವನೇಶ್ವರಿ ದ್ರಾವಿಡ ಕನ್ನಡ ಮುಕುಟ ಧರಿಸಿದ ವಾಗೀಶ್ವರಿ ಸಾಮರಸ್ಯದ ಭಾವದ ಕಹಳೆ ಈ ಮಣ್ಣಿನ ಉಸಿರು ಶಾಂತಿ ಕಾಂತಿ ಮೆರೆಸಿದ ಕನ್ನಡವೇ ಹಸಿರು

----------------------------------

ನೋಂದಣಿ ಐಡಿ : KPFS2-9111

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top