ಬಾಲ್ಯದ ನೆನಪು
ರಚನೆ : ಬಸವೇಶ. ಎಸ್
----------------------------------
ಮರೆತುಹೋಗಿದ್ದ ಬಾಲ್ಯದ ನೆನಪು ಮರುಕಳಿಸಿತು ಇಂದು ಸವಿ ಅದರ ನೆನೆಪು ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗಿದ್ದು ಅಂದು ಎರಡು ತಿಂಗಳ ರಜೆಯನ್ನು ಮಜಾ ಮಾಡಿದ್ದು ಕಡ್ಡಿ, ಹೊವು, ಎಲೆಯಲ್ಲಿ ಸೇರಿಸಿ ಒಂದು ಚಪ್ಪರ ಕಟ್ಟಿ ಲಾಟರಿ ಟಿಕೆಟ್ ಪೇಪರ್ ನಲ್ಲಿ ಸುಂದರ ಹಾರ ಮಾಡಿ ಕೆರೆದಡದಮಣ್ಣಿನಲ್ಲಿ ಗಣೇಶನ ಮೂರ್ತಿ ಮಾಡಿ ಸಂಭ್ರಮ ಸಂತೋಷ ಪಟ್ಟು ಆಟವಾಡಿದ ಹೊತ್ತು ಅಜ್ಜಿ ದೇವರ ನೈವೈದ್ಯ ಕ್ಕೆ ಮಾಡಿಟ್ಟಿದ್ದ ತಂಬಿಟ್ಟು ನಾ ಕದ್ದು ಮರೆಯಲಿ ತಿಂದು ಬಿತ್ತು ನಾಲ್ಕೇಟು ರಾತ್ರಿ ಹೊತ್ತಿನಲ್ಲಿ ಅಜ್ಜ ಹೇಳುತ್ತಿದ್ದ ಕಥೆ ನೊರೆಂಟು ಅಜ್ಜ ಅಂದಿನ ದಿನದಲ್ಲಿ ಕೊಟ್ಟ ಒಂದು ರೂಪಾಯಿಗೆ ಕೊಂಡು ಕೊಳ್ಳುತ್ತಿದ್ದೆ ಬಣ್ಣದ ಬೊಂಬೆ ಮಿಠಾಯಿ ಸೈಕಲ್ನಲ್ಲಿ ಊರು ಸುತ್ತುವನಾಗಿ ನಾನಾದೆ ಸಿಪಾಯಿ ನೊರೆಂಟು ನೆನಪುಗಳು ಮನದಲ್ಲಿ ಉಳಿದಿವೆ ಗಟ್ಟಿ
----------------------------------
ನೋಂದಣಿ ಐಡಿ : KPFS2-9073