Submission 5772

ಅಂತರ್ ಜಾಲ

ರಚನೆ : ಸ್ವಾತಿ ಹೆಗಡೆ

----------------------------------

ಮುಂಜಾನೆಯೂ ಅಲ್ಲ, ಮುಸ್ಸಂಜೆಯೂ ಅಲ್ಲ.. ಮಟ ಮಟ ಮಧ್ಯಾಹ್ನ! ಎದೆಯ ಸುಡುವ ನೆನಪು.. ಆಗ ತಾನೆ ಮೂಡಿದ ಕಂಬನಿ ಆವಿ ಬಯಕೆಯಿಲ್ಲದ ಹೃದಯ ಬರಡು ಬಾವಿ ಕಳೆದುಕೊಂಡದ್ದೇನಿಲ್ಲ ಪಡೆದದ್ದೂ ಇಲ್ಲ.. ಸೋಲಲಿಲ್ಲ.. ಆದರೆ ಗೆಲುವೂ ಇಲ್ಲ.. ಸಾಂತ್ವನಕ್ಕೆಂದು ಮಂಜಿನ ಹನಿಯಿಲ್ಲ ತಂಗಾಳಿಯ ತಂಪಿಲ್ಲ, ಬರಿದಾದ ಬಾನು ನೋಡಿದರೆ ನಗುವ ಚಂದಿರನಿಲ್ಲ.. ರವಿ ಮತ್ತೂ ಸುಡುವನಲ್ಲ! ದೂರ ದೂರದ ತಿರುವುಗಳ ದಿಟ್ಟಿಸುವಾಗೆಲ್ಲ, ಹೊಸದೊಂದು ಹಗಲುಗನಸು.. ಹಳೆಯದೊಂದು ದುಸ್ವಪ್ನ.. ಕಳೆದುಕೊಂಡ ನನ್ನನ್ನು ಹುಡುಕಿ ಹೊರಟ ನಾನು!

----------------------------------

ನೋಂದಣಿ ಐಡಿ : KPFS2-9072

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top