ಬಣ್ಣಿಸಬೇಡ ಕಾಗೆನಾ
ರಚನೆ : ದೀಪಾ ರಾಥೋಡ್
----------------------------------
ಮುಂಜಾವು ಚಿಲಿ ಪಿಲಿ ಕಲರವ. ಉದಯರಾಗ ಪಸರಿಸುವ ಚೆಲುವು. ನಯನಗಳ ಸ್ವಪ್ನದ ಸೊಗಸಿಗೆ. ಮಂದಹಾಸ ಬಿರಿತು ನಮ್ಮ ಮನಸು!! ಅಳತೆಗೆ ಬಾರದ ನೀಲಿ ಬಾನಲ್ಲಿ. ತಳ ತಳನೆ ಹೊಳೆದು ತಂಪಾದ ಶಶಿತನಯ. ಆ ಶಶಿಯ ಬೆಳಕಲ್ಲಿ ಹಸಿವು ನೀಗಿಸಲು ಬಂದಾವು ಪಕ್ಷಿಗಳು. ಒಣಗಿ ಹೋದ ರೆಂಬೆಗಳಿಗೆ ತಬ್ಬಿಬ್ಬು ಕೊಂಡಾವ ರಂಬೆಗಳಂತೆ! ಮೖಯ ಬಣ್ಣಕ್ಕೆ ಕಾಗೆನಾ, ರತ್ನ ಪಕ್ಷಿನಾ ಎಂದು ಬಣ್ಣಿಸುವ ಜಗತ್ತು. ಆ ಜಗತ್ತೇ ಅಂದು ನಿನಗಾಗಿ ಸಮಯವನ್ನು ಮಿಸಲಿಡುವುದು ಆಶ್ಚರ್ಯ. ಶುಭ ಕಾರ್ಯಕ್ಕೆ ಕಂಡರೆ ನೀ ಅಪಶಕುನ ಎನ್ನುವ ಜಗತ್ತೆ. ನಿನ್ನ ಸ್ಮರಿಸಿ ಸ್ಮಶಾನದ ಪಿಂಡವ ತಿನ್ನಲು ಕಾಯುತಿರುವುದು!
----------------------------------
ನೋಂದಣಿ ಐಡಿ : KPFS2-9034