ಯುಗಾದಿ
ರಚನೆ : ಅಂಬಿಕಾ ಸಿಂಧೆ
----------------------------------
ಸಿಹಿಯಾದ ನೆನಪುಗಳ ತೃಪ್ತಿಯಿಂದ ಸ್ವೀಕರಿಸಿ ಬರುವ ಸುಖ- ದುಃಖಕೆ ಸಜ್ಜಾಗಿ ನಡೆಯಿರಿ ಕಳೆದ ಕಷ್ಟವನು ಬೆಲ್ಲದೊಂದಿಗೆ ಕುಟ್ಟಿ ಕಷ್ಟವನು ಇಷ್ಟವಾಗಿಸಿ ನವಚೈತನ್ಯದಿ ನಡೆಯಿರಿ ಒಣಗಿದ ಹೂಗಳ ಗೊಬ್ಬರವನ್ನಾಗಿಸಿ ಅರಳಿದ ಹೂಗಳ ಆನಂದದಿ ಆದರಿಸಿ ಹುಳಿಯಾದ ಮಾವನು ಸಿಹಿಯಾಗಿಸಿ ಸಿಹಿಯಾದ ರಸವನು ಸವಿಯುತ ಸಾಗಿಸಿ ನವಶಕ್ತಿಗಳು ಅಸ್ತು ಅಸ್ತು ಎನ್ನುತಿರಲು ನವಕೋಟಿ ಜಗಕೆ ಒಳ್ಳೆಯದ ಬಯಸಿ ಸೃಷ್ಟಿಯೇ ಸಾಕ್ಷಿಯಾಗಿ ಪುಷ್ಟಿಯ ನೀಡುವಾಗ ಯುಗದ ಆದಿ ಯುಗಾದಿಯೊಂದಿಗೆ ಮುನ್ನಡೆಯಿರಿ ನವಹರುಷದಿ ಮುನ್ನಡೆಯಿರಿ.
----------------------------------
ನೋಂದಣಿ ಐಡಿ : KPFS2-9006