Submission 5674

ನನ್ನವನು- ಹೋಲಿಕೆಗೆ ಸಿಗದವನು

ರಚನೆ : ಅಶ್ವಿನಿ ಎಸ್

----------------------------------

ಅವನು ನನ್ನೆಲ್ಲಾ ತಪ್ಪುಗಳ ತಿದ್ದಿ, ಮತ್ತೆ ಮತ್ತೆ ಮಗುವಿನಂತೆ ಮುದ್ದಿಸಿದವನು. ಅವನು ತನ್ನೆಲ್ಲಾ ಜವಾಬ್ದಾರಿಗಳ ನಡುವೆ ನನ್ನನ್ನು ಖುಷಿಯಾಗಿರಿಸಲು ಹಾತೊರೆವನು. ಅವನು ನನಗೆ ತನ್ನ ತಾಯಿಯ ಸರಿಸಮನಾದ ಸ್ಥಾನವ ನೀಡದಿದ್ದರೂ, ತನ್ನ ಸರಿಸಮನಾದ ಸ್ಥಾನವ ನೀಡಿ ನನ್ನನ್ನೇ ತನ್ನ ಅರ್ಧಾಂಗಿಯಾಗಿರಿಸಿ ಕೊಂಡಿರುವನು. ಅವನು ತನ್ನ ಮಗಳಿಗೆ ಸಮನಾದ ಕಾಳಜಿಯ ತೋರಿಸದಿದ್ದರೂ, ನನ್ನ ತಂದೆಯ ಕಾಳಜಿಗೆ ಸಮನಾದ ವಾತ್ಸಲ್ಯ ನೀಡುವನು. ನನ್ನ ಪ್ರೀತಿ ಅವನಿಗೆ ಪ್ರೀತ್ಸೋದನ್ನ ಮಾತ್ರ ಕಲಿಸಿರಬಹುದು. ಆದರೆ, ಅವನ ಪ್ರೀತಿ ನನಗೆ ಶಾಂತಿ, ಸಹನೆ, ಸಹಕಾರ ಕಲಿಸಿದೆ...

----------------------------------

ನೋಂದಣಿ ಐಡಿ : KPFS2-9002

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top