ಕನ್ನಡ ಕಂಪು ಮನಕೆ ಇಂಪು
ರಚನೆ : ಕಾವ್ಯಾ ಎಸ್
----------------------------------
ಕೋಟಿ ಮನಕೆ ಇಂಪು ಕಸ್ತೂರಿಯ ಕಂಪಿನ ಕನ್ನಡ. ಮುತ್ತೈದೆಯ ಅಲಂಕಾರ ಪರಂಪರೆಯ ಪ್ರತೀಕವಿ ಕನ್ನಡ ರನ್ನ ಪಂಪ ಕವಿ ಶ್ರೇಷ್ಠರ ಕುಂಚದರಸಿ ನನ್ನೀ ಕನ್ನಡ ಬನವಾಸಿಯ ಕಲೆಯ ಬಲೆಯಲಿ ನಲಿವ ಕನ್ನಡ ಪಂಪರ ಪ್ರತಿಮಿಡಿತದ ಪ್ರತಿಧ್ವನಿ ಈ ಸವಿ ಕನ್ನಡ ದಾಸ ಪುರಂದರ ಕಂಠದಿ ಸಂಗೀತವಾದ ಕನ್ನಡ ರತ್ನ ರ ಪದಗಳ ಅಮಲಿನ ಗುಂಗಿನಲ್ಲಿ ಗುನುಗಿನ ಕನ್ನಡ ಕದಂಬ ಚಾಲುಕ್ಯ ಹೊಯ್ಸಳರು ಆಶ್ರಯಿಸಿದ ಕನ್ನಡ ಹಲ್ಮಿಡಿಯಲ್ಲಿ ಕಾಕುತ್ಸರ ಶಾಸನ ಇತಿಹಾಸದಿ ಕನ್ನಡ ಕುಲಶೇಖರರ ರವಿವರ್ಮನ ಕುಂಚದಲ್ಲಿ ಅರಳಿದ ಕನ್ನಡ ಬೇಂದ್ರೆ ಕಾರಂತರ ಪ್ರೀತಿಗೆ ಒಲಿದ ಕನ್ನಡ ಕುವೆಂಪುರ ಹೃದಯ ಡಿಂಡಿಮದಿ ಕರ್ಕಿ ಹಚ್ಚಿದ ದೀಪವೀ ಕನ್ನಡ ಕೋಟಿ ಕಂಠಗಳ ಸ್ವರ ಮಾಧುರ್ಯವಿ ಕನ್ನಡ ತಾಯಿ ಭಾರತೀಯ ಸವಿ ಸಾಹಿತ್ಯದ ಸಹಿ ಕನ್ನಡ
----------------------------------
ನೋಂದಣಿ ಐಡಿ : KPFS2-9001