Submission 5658

ಮುಗ್ಧ ಮನಕೊಂದು ಮಾರ್ಗದೀಪ

ರಚನೆ : ದೀಪಿಕಾ ಬಿ ಹೆಚ್

----------------------------------

ಇಂದು ಜೊತೆಗಿರುವರು ನಾಳೆಗಿಲ್ಲ! ಎಂದೂ ಜೊತೆಗಿರುವೆನೆಂದವರು ಇಂದೇ ಇಲ್ಲ! ಇಂದು ನಾಳೆಗಳ ಮಧ್ಯೆ ಸಿಲುಕಿದ ಮನಕ್ಕೆ! ಇನ್ಯಾರ ಜೊತೆಗಿರುವ ಬಯಕೆ ಇನ್ನೆಂದಿಗೂ ಇಲ್ಲ! ಇಂದು ನಾಳೆಗಳ ಮಧ್ಯೆ ಸಿಲುಕಿದ, ಓ ಮನವೇ ಈ ನಶ್ವರ ಬದುಕಿನಲಿ ಚಿರಶಾಶ್ವತ ವ್ಯಕ್ತಿಯ ಹುಡುಕಾಟವೇ ಇಂದಿನ ಬಗ್ಗೆ ಗೊಂದಲವೇಕೆ? ನಾಳೆಯ ಬಗ್ಗೆ ತಲ್ಲಣವೇಕೆ? ಈ ಬಣ್ಣದ ಲೋಕದಲ್ಲಿ ಭಗವಂತನ ಕೈಗೊಂಬೆಗಳೆಲ್ಲ! ಇಲ್ಲಿ ಯಾವುದೂ ಶಾಶ್ವತವಲ್ಲ! ಬದುಕಿರುವ ಈ ಕ್ಷಣ ನಿನ್ನದೆಂದು ಭಾವಿಸು! ಅದನ್ನು ನೀ ಪ್ರೀತಿಸುವವರೊಂದಿಗೆ ಜೀವಿಸು!

----------------------------------

ನೋಂದಣಿ ಐಡಿ : KPFS2-8992

0
Votes
97
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top