ಮಗಳು
ರಚನೆ : ವಿಠ್ಠಲ ಜಡೆಪ್ಪ ಸಂಪಗಾರ
----------------------------------
ಅಪ್ಪನ ಬೆರಳು ಹಿಡಿದು ನಡೆಯುವ ಪರಿ, ಅವಳೇ ಅಪ್ಪನ ಮುದ್ದು ಕುಮಾರಿ. ಕರೆಯಲು ಮುದ್ದಾಗಿ 'ಅಪ್ಪ' ಎಂದು, ಭುವಿಯೇ ಸ್ವರ್ಗವಾದ ಹಾಗಿದೆ ಇಂದು.||೧|| ಮೊಗದ ನಗುವು ಹುಣ್ಣಿಮೆ ಚಂದಿರನ ಬೆಳಕು, ಮನೆಯ ಬೆಳಗಲು ಅವಳೇ ಬೇಕು. ಗೆಜ್ಜೆಯ ಸದ್ದು ಕೇಳಲು ಹೃದಯಕ್ಕೆ ಇಂಪು, ಅವಳಿರುವಾಗ ಮನಸಿಗೆ ತಂಪು.||೨|| ಅವಳು ಇದ್ದರೆ ಮನೆಯಲಿ ಸಂಭ್ರಮ, ಮರೆಸುವಳು ಎಲ್ಲರ ದಿನದ ಶ್ರಮ. ನಗುತ್ತಾ ಓಡಾಡುವ ನಮ್ಮನೆ ಸಂಜೀವಿನಿ, ಮಗಳಲ್ಲ ಇವಳು, ನಮ್ಮನ್ನಾಳುವ ಯುವ ರಾಣಿ.||೩||
----------------------------------
ನೋಂದಣಿ ಐಡಿ : KPFS2-8977