ಅನಾಥ ಮಕ್ಕಳು
ರಚನೆ : ಗೊರೂರು ಜಮುನ
----------------------------------
ಅಳಬೇಡ ಕಂದ ಯಾರಿಲ್ಲ ನಮಗೆ ಹಾಲುಡಿಸಲು ಅಮ್ಮ ಬರಲಾರಳು ಬಳಿಗೆ ಕಣ್ಣೀರ ಕಂಬನಿ ಇಳಿದಿದೆ ಧರೆಗೆ ಹಸಿದೊಡಲ ಸಂಕಟವು ಕೇಳದು ಶಿವಗೆ / ಬಿಸಿಲಲ್ಲಿ ಬೇಯುತಿದೆ ಬಡಕಲ ಜೀವ ಗುಡಿಸಲಿಗೂ ಗತಿಯಿಲ್ಲ ಚಾವಡಿಯೆ ತಾವು ತೊಟ್ಟಿಯಲಿ ಹೆಕ್ಕಿರುವ ಎಂಜಲೆಲೆ ಮೃಷ್ಟಾನ್ನ ಅಮ್ಮನ ಕೈತುತ್ತು ಬಯಸುತಿದೆ ಹೂ ಮನ / ತಾಯ್ ಮಡಿಲ ತೊಟ್ಟಿಲಲಿ ಜೀಕುವ ಬಯಕೆ ಅಣ್ಣನ ಅಪ್ಪುಗೆಯೆ ಆಗಸದ ಹೊದಿಕೆ ಆಡುವ ಹಸುಳೆಗೆ ಭಾರದ ಹೊರೆ ಕೇಳುವರು ಯಾರು ಕಂದನ ಮೊರೆ/ ಭೇದವು ಏತಕೆ ಭಗವಂತನ ಮನದಿ ಕಾಯುವರು ಯಾರು ಅನಾಥ ಕಂದನನು ಜಗದಿ
----------------------------------
ನೋಂದಣಿ ಐಡಿ : KPFS2-8963