ದಯೆಯಿರಲಿ ವಿಧಿಯೇ.
ರಚನೆ : ಮಹಾಲಕ್ಷ್ಮೀ. ಕೆ. ಎನ್
----------------------------------
ಮುಕ್ಕಿ ತಿಂದಿತ್ತು ತಾತ್ಸಾರ ಅಸಡ್ಡೆ, ಅಲ್ಲಿ ಬಾಲ್ಯ ಸತ್ತಿತ್ತು. ಸದ್ದೇ ಮಾಡದಂತೆ ಗಂಟಲು ಬಿಗಿದಿತ್ತು. ಬೇಡದ ಭ್ರೂಣ ಪ್ರಪಂಚಕ್ಕೆ ಬಂದದ್ದಾದರೂ ಯಾಕೇ? ಸ್ವಯಂ ಪ್ರಭೆ ಅರಳಿತು ತನ್ನಷ್ಟಕ್ಕೆ ತಾನಾಗೇ. ಮೂರು ಮಾರು ಜಡೆಯಿದೆ,ಮೊಳ ಮಲ್ಲಿಗೆಗೆ ಕೊರತೆ. ಹೆಚ್ಚೇ ಕಾಯಿಸಿ ಹೆಪ್ಪು ಹಾಕಿ ಕೆನೆಮೊಸರಲ್ಲಿ ಕಡೆದಾಗ ಬಂದ ಬೆಣ್ಣೆಯಂಥಾ ಕೆನ್ನೆ. ಹುಟ್ಟುತ್ತಲೇ ಕಾಡಿಗೆ ತೀಡಿದಂಥಾ ಕಣ್ಣು; ಧ್ಯಾನಸ್ಥನಾಗಿಸುವ ಕುಡಿ ನೋಟ. ಸಮುದ್ರ ಮಂಥನದಲ್ಲಿ ಬಂದ ಸೌಂದರ್ಯದಧಿದೇವತೆಯೇ ? ಹೆಣ್ಣೇ. ? ನಟರಾಜನೊಲಿದ್ದಿದ್ದಾನೆ ಕಳೆದ ಕಾಲ್ಗೆಜ್ಜೆಗಳು ಸಿಗಲಿ ಭಾರೀ ಕನಸಿದೆ ದಯೆತೋರು ವಿಧಿಯೇ; ಅಲ್ಲಮನ ಮದ್ದಳೆಯೇಯಿರಲಿ. ಸ್ವಯಂ ಪ್ರಭೆಯ ಬೆಳಕು ಅನಂತವಾಗಲಿ
----------------------------------
ನೋಂದಣಿ ಐಡಿ : KPFS2-8962