Submission 5554

ದೇವರಿಗಿಂತ ಮಿಗಿಲು ತಾಯ ಮಡಿಲು

ರಚನೆ : ಹನುಮಪ್ಪ ವಾಯ್. ಭಜಂತ್ರಿ ಹನಮಸಾಗರ

----------------------------------

ಮಾಂಸದ ಮುದ್ದೆಯಾಗಿದ್ದು ನಿನಗರಿವಿಲ್ಲ ನವಮಾಸ ನೋವಕೊಟ್ಟಿದ್ದು ನಿನಗರಿವಿಲ್ಲ ಪ್ರಸವದಲಿ ಸತ್ತು ಹುಟ್ಟಿದವರ ಅರಿವಿಲ್ಲ ಭುವಿಯಲಿ ಬೆಳೆದದ್ದು ನಿನಗರಿವಿಲ್ಲ ಬೆಳೆದಾದ ಮೇಲೆ ನಿನ್ನ ಬದುಕನು ಕಟ್ಟಿದವರ ಅರಿವಿಲ್ಲವೇ? ಕರುಳಿನ ಕುಡಿ ನೀನೆಂದು ನೀ ಕೇಳಿದ್ದ ಕೊಡಿಸಿ ನಿನ್ನ ತಾಳಕೆ ಕುಣಿದರು ನೀನೇನ ಬಲ್ಲೆ ಈ ಪ್ರೇಮವ ! ದೇವರಿಗಿಂತ ಮಿಗಿಲು ಈ ತಾಯ ಮಡಿಲು ಮಗು ನೀ ಹೇಳು ಕಣ್ಮುಂದಿನ ದೇವರಿಗೆ ಮಾಡುವೆಯಾ ಮೋಸವ? ಮಾಡಿದರೆ ನೀ ಮೋಸ ಪಾತಾಳಕೆ ತುಳಿವ ನಮ್ಮ ವೀರಾಂಜನೇಯ||

----------------------------------

ನೋಂದಣಿ ಐಡಿ : KPFS2-8935

633
Votes
2,982
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top