ಕವಿ ಮನವೇ...
ರಚನೆ : ರವಿನಾಗ್ ತಾಳ್ಯ
----------------------------------
ತಿಳಿ ಮನವ ತೆರೆದಿಟ್ಟು ಬಿಗುಮಾನ ಬದಿಗಿಟ್ಟು ಸಾಗಲಿ ಬರವಣಿಗೆ ಅಂತರಂಗದ ಅರಿವಿಗೆ ಈರ್ಷ್ಯೆಯು ನಿನಗಲ್ಲ ನುಡಿ ಬೆಳಗಿಸು ಜಗಕೆಲ್ಲ ನಾನೆಂಬುವವ ನೀನಲ್ಲ ನೀನಷ್ಟೆ ಎತ್ತರವಲ್ಲ ಸಹಪಯಣಿಗರು ಇಲ್ಲುಂಟು ತೆಗೆದಿಡು ಮುಖದ ಗಂಟು ಬೆಳೆಯುತಿರು ಬೆಳೆಸುತಿರು ಪದಗಳಲಿ ಬದುಕುತಿರು ಅಕ್ಷರಗಳು ಅಕ್ಷಯವಾಗಲಿ ಲೇಖನಿ ಜನಮನ ತಿದ್ದುತಿರಲಿ
----------------------------------
ನೋಂದಣಿ ಐಡಿ : KPFS2-8871