ಸಹಧರ್ಮಿಣಿ
ರಚನೆ : ನವೀನ್ ಶೇಟ್
----------------------------------
ಬೀಸುತ್ತಿಹುದು ತಂಗಾಳಿ ಮನದಲ್ಲಿ ಏನೋ ಕಚಗುಳಿ ಮನದನ್ನೆ ತಂದಿಹಳು ಬಳುವಳಿ ನನಗಿದೆ ಅವಳ ಮೇಲೆ ಕಳಕಳಿ. ಎಂದೆಂದಿಗೂ ಅಮರ ನಮ್ಮ ಬಂಧ ಯಾರೂ ಇಲ್ಲ ಅವಳಿಗಿಂತ ಚೆಂದ ಅಂದ ಚೆಂದಕ್ಕಿಂತ ನಮ್ಮ ಸಂಬಂಧ ದೇವರೇ ನಾಚಿಸುವಂತಹ ಅನುಬಂಧ. ಮಡದಿಯ ಮಾತೆಂದರೆ ಮುತ್ತು ಅವಳಲ್ಲಿದೆ ಏನೋ ಒಂದು ಗತ್ತು. ಸಹಧರ್ಮಿಣಿ ಅವಳೇ ಕರುಣಾಮೂರ್ತಿ ಎಲ್ಲರನ್ನ ಬಿಟ್ಟು ಬಂದ ಸಾಕಾರ ಮೂರ್ತಿ ಹಬ್ಬಲಿ ಎಲ್ಲ ಕಡೆ ಅವಳ ಕೀರ್ತಿ ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ ಜೀವನಪೂರ್ತಿ
----------------------------------
ನೋಂದಣಿ ಐಡಿ : KPFS2-8843