ಜಂಗಮವಾಣಿ
ರಚನೆ : ಸರೋಜಾ ಹಡಪದ
----------------------------------
ಓ..... ಜಂಗಮವಾಣಿಯೇ ನೀ ಆವರಿಸಿಕೊಂಡಿರುವೆ ಜಗತ್ತನ್ನೇ ಜಗತ್ತನ್ನು ಮರೆತು ಅವಲಂಬಿಸಿರುವೆ ನಾನು ನಿನ್ನನ್ನೇ ನೀ ಬರಿ ಜಂಗಮವಾಣಿ ಅಲ್ಲ ನನ್ನೆದೆ ಬಡಿತದ ರಾಣಿ ನಿ ಶಬ್ದ ಮಾಡಿದರೆ ನನ್ನುಸಿರಾಡುವುದು ನಿ ಸುಮ್ಮನಿದ್ದರೆ ನನಗೇನು ದೋಚದು ಇಂಟರ್ನೆಟ್ ಇದ್ದರೆ ಮನವೊಂದು ಧರ್ಮ ಛತ್ರ ಇಂಟರ್ನೆಟ್ ಇಲ್ಲದಿದ್ದರೆ ಎಲ್ಲವನ್ನು ಬರೆಯುವ ಕಲ್ಪನೆಯ ಪತ್ರ ಕರೆನ್ಸಿ ಇದ್ದರೆ ಕೋಟ್ಯಾಧಿಪತಿ ನಾನು ಕರೆನ್ಸಿ ಇಲ್ಲದಿದ್ದರೆ ಕೋತಿಯಾಗಿ ಬಿಡುವೆ ನಾನು ಟಿಕ್ ಟಾಕ್ ಮಾಡುತ್ತಾ, ಟಿಪ್ ಟಾಪ್ ಆಗಿರುವೆ ನಾನು ನಿನ್ನ ಟಿಕ್ ಟಿಕ್ ಧ್ವನಿಯ ಕೇಳದಿದ್ದರೆ ಕಣ್ಣೀರಿಗೆ ಟಿಕೇಟು ತಗೆಸುವೆ ನಾನು ....
----------------------------------
ನೋಂದಣಿ ಐಡಿ : KPFS2-8842