Submission 5390

ನೀನಾಗುವೆಯ ಮಳೆ?

ರಚನೆ : ಸುಷ್ಮರಾಣಿ ಜಿ

----------------------------------

ಪುಟ್ಟಿದಂದೇ ಕಿವಿಗೆ ಊದಿದರು ನಿನ್ನ ನಾಮ,ಕುಲಕಸುಬ,ತಾಣ,ಮಿತಿಯ. ಏರಿದರು ಮೂಢ ಸಿದ್ಧಾಂತವ ಬೆನ್ಮೇಲೆ ಮತ್ತೆಂತೂ ಕಾಣುವುದು ನಿನ್ನಕ್ಷಿ ಆಶಾಗಸವ? ಕೈಗೆಟುಕುವುದೇ ಹಾರುವ ಪಕ್ಕಿ ಸ್ವಾತಂತ್ರ? ಬಯಸುವುದೇ ಕಗ್ಗತ್ತಲ ಚಿತ್ತ ಚಂದ್ರ ತಾರೆಯ? ಬಿದ್ದು ಏಳ್ದು ಓಡಿ ಬೆಮರಿ ಮುಳ್ಳು-ಕಲ್ಲು ಚುಚ್ಚಿ ಕಣ್ಮರೆಯಾಯ್ತಲ್ಲ ಪಸಿರ ಉಸಿರು! ಇನ್ನುಮ್,ಕಾಯುವೆಯ ಮಾಯ ಪವಾಡವ? ಪಿಂತೆಂದು ಬಾರದ ಅವತಾರಿಯ? ಇಲ್ಲದಿರೆ,ಒಡಲ ಭೂಮಿ ಬಿರುಕ ಮುಚ್ಚಿ, ಪಸಿರ ಉಸಿರ ಚೆಲ್ಲಿ,ಅಜ್ಞಾನ ಬೆನ್ಬಾರ ಕೆಡವಿ, ಜ್ಞಾನ ಸುಮ ಅರಳಿ, ಸ್ವಧರ್ಮ ಸುಗಂಧ ಸೂಸೋ ಮಳೆ ನೀನಾಗುವೆಯ?

----------------------------------

ನೋಂದಣಿ ಐಡಿ : KPFS2-8809

1
Votes
97
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top