Submission 5348

ಕರುನಾಡ ಸಿರಿಹೊನಲು

ರಚನೆ : ಶೃತಿ ಮಂಜುನಾಥ್

----------------------------------

ಕರಗಿ ನೀರಾಯಿತು ಕಾರ್ಮುಗಿಲು ನಾಚಿ ರಂಗೇರಿತು ಬೆಳ್ಮುಗಿಲು ತಂಪೆರೆಯಲು ಸಿರಿಹೊನಲು ಕಂಪುಸೂಸಿತು ಸೌಗಂಧದ ಮಡಿಲು ಭೋರ್ಗರೆಯಿತು ಕರುನಾಡ ಕಡಲು ಹಸಿರು ಚೆಲ್ಲಿತು ಭೂತಾಯ ಒಡಲು ಹಾಡಿ ನಲಿಯಿತು ಮರಿ ಕೋಗಿಲು ಚಿಗುರೊಡೆದ ಸವಿ ಗರಿಯ ಮೆಲ್ಲಲು ಕೈ ಬೀಸಿದವು ಬನಸುಮವು ಕುಪ್ಪಳಿಸಿದವು ಖಗ ಮೃಗಗಳು ಭುವಿ ಸಗ್ಗವಾಯಿತು ನೀನು ಧರೆಗಿಳಿಯಲು ಚಂದಿರ ತುಸು ನಾಚಿದನು ಇಳೆಯ ಸೊಬಗ ಕಾಣಲು"

----------------------------------

ನೋಂದಣಿ ಐಡಿ : KPFS2-8787

0
Votes
96
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top