ವಾಸ್ತವ
ರಚನೆ : ಡಿ.ಶಬ್ತಿನಾ ಮಹಮದ್ ಅಲಿ
----------------------------------
ನೀನು ಬುದ್ಧನನ್ನು ಒಪ್ಪುತ್ತಿಲವೆಂದಾದರೆ ನಿನ್ನ ಮನದಲಿ ಪ್ರೇಮಕೆ ಜಾಗವಿಲ್ಲ ಎಂದರ್ಥ! ನೀನು ಬಸವಣ್ಣನನ್ನು ಒಪ್ಪುತ್ತಿಲ್ಲವೆಂದಾದರೆ ನಿನ್ನ ಮನದಲಿ ಅರಿವಿಗೆ ಜಾಗವಿಲ್ಲ ಎಂದರ್ಥ! ನೀನು ಅಂಬೇಡ್ಕರ್ ರನ್ನು ಒಪ್ಪುತ್ತಿಲ್ಲವೆಂದಾದರೆ ನಿನ್ನ ಮನದಲ್ಲಿ ಸಮಾನತೆಗೆ ಜಾಗವಿಲ್ಲ ಎಂದರ್ಥ ನೀನು ಗಾಂಧೀಜಿಯನ್ನು ಒಪ್ಪುತ್ತಿಲ್ಲವೆಂದಾದರೆ ನಿನ್ನ ಮನದಲಿ ದೇಶಭಕ್ತಿಗೆ ಜಾಗವಿಲ್ಲ ಎಂದರ್ಥ! ನೀನು ಭಾರತದ ಬಹುತ್ವವನ್ನ ಒಪ್ಪುತ್ತಿಲ್ಲವೆಂದಾದರೆ ನಿನ್ನ ಮನದಲಿ ವಿವಿಧತೆಯಲಿ ಏಕತೆಗೆ ಜಾಗವಿಲ್ಲ ಎಂದರ್ಥ!
----------------------------------
ನೋಂದಣಿ ಐಡಿ : KPFS2-8786