ಭೂಮಿಯ ಸುತ.
ರಚನೆ : ಚಂದ್ರಶೇಖರ
----------------------------------
ಸೊಕ್ಕಿದ ಜಗದೊಳಗೆ ಹಿಗ್ಗಿ. ಕುಗ್ಗದೆ ಬೆವರಲ್ಲಿ ಸೊರಗಿ ಕೊರಗಿದ ಜೀವಕ್ಕೆ ಅನ್ನದ ಬೆಲೆ ನೀಡಿರೋ . ಭುವಿಯಲ್ಲಿ ಅವ ನೆನೆಯಿರೊ ಬರಡು ಭೂಮಿಯಲಿ ತಾನು ಉತ್ತಿ, ಬಿತ್ತಿ, ಮೆಳೆಯ ಬರುವ ನೆನೆದು ರೋಗ ಭಾದೆಗೆ ಮರುಗಿ ಬೆಳೆಯ ತಾ ತಗೆದು ಉಣಲಿಕ್ಕುವನು ಈ ಜಗದಿ. ಬಯಲು ಸೀಮೆಯ ತಿಳಿದು ಮೈ ಗಟ್ಟಿಯ ದಣಿವರಿಸಿ ಕಪ್ಪು ಕೆಂಪಿನ ನೆಲದಲ್ಲಿ ಹಸಿರ ತೆನೆಯ ಉಸಿರಿಸಿದನು, ತಾನು ಭೂ ಮಾತೆಯ ಮಮತೆಯ ಪ್ರೇಮದಲಿ ತನ್ನುಸಿರಾ ಕೊನೆವರೆಗೂ ನೆಲ ಸಿರಿಯ ಮೇಳೈಸಿ ಧರೆಯ ಮನುಕುಲಕ್ಕೆ ಅನ್ನವ ದಕ್ಕಿಸಿದವನು ಜಗದ ಸುಖವನ್ನು ತನ್ನಲ್ಲಿ ಕಂಡಿಹನು ಬೆಳೆದ ಅನ್ನಕ್ಕೆ ಇಂದು ಬೆಲೆಯಿಲ್ಲ ವೆಂದು ಹಾದಿ ಬೀದಿಯಲ್ಲಿ ಬಂದು ನೆರಳತಿಹನು ಈ ಅನ್ನ ಭ್ರ್ಮಹನ ನೋವ ಕಂಡು ಕೊನೆಗಾಣಿಸಿರೊ
----------------------------------
ನೋಂದಣಿ ಐಡಿ : KPFS2-8763