Submission 5312

ನಿದ್ರಿಸದ ನೇಸರ

ರಚನೆ : ಮಂಜುಳ ​​ಪಂಚಾಕ್ಷರಿ

----------------------------------

ನಿಷ್ಕಲ್ಮಶ ಹೃದಯದ ನೇಸರ ಮೂಡಿದಾಗ ಬಾನೆಲ್ಲ ಸುಂದರ ಹಕ್ಕಿಗಳ ನರ್ತನದ ಇಂಚರ ಮನುಷ್ಯಕುಲಕ್ಕೆ ಹೊಸತನದ ಸಡಗರ ಗಿಡಮರಗಳಿಗೆ ನಿನ್ನಿಂದ ಸಿಗುವ ಚೈತನ್ಯ ಸುಮಧುರ ನಿನ್ನ ಅಗಲುವಿಕೆಯನ್ನು ಸಹಿಸುವುದು ತುಂಬಾ ಬೇಸರ ನಿನ್ನನ್ನು ವರ್ಣಿಸಲು ಸಾಲದಯ್ಯ ನನ್ನ ಪದಗಳ ಭಂಡಾರ ನಿನಗೆ ನಾ ಹೇಳಬಯಸುವೆ ಧನ್ಯವಾದಗಳನ್ನು ಅಪಾರ ಸ್ವಚ್ಛಂದ ಅಗಸ ನಿನ್ನ ತವರು ಬೆಳಗಿಂದ ಸಂಜೆಯ ತನಕ ನಿಲ್ಲದು ನಿನ್ನ ಬೆವರು ಮರ, ಗಿಡ, ಸಕಲಜೀವಿಗಳಿಗೂ ನಿನ್ನಿಂದಲೇ ಉಸಿರು ನೀನಿಲ್ಲದೆ ಹೇಗೆ ಶುರುವಾಗುವುದು ಬ್ರಹ್ಮಾಂಡದ ಪ್ರತಿ ಚಿಗುರು

----------------------------------

ನೋಂದಣಿ ಐಡಿ : KPFS2-8762

31
Votes
194
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top