Submission 5290

ಜ್ಯೋತಿ ತಾ ವಿಶ್ವರೂಪಿಣಿ

ರಚನೆ : ಸುಭಾಷ್ ಹೇಮಣ್ಣಾ ಚವ್ಹಾಣ

----------------------------------

ಎಲ್ಲರ ಮನೆ ಮನವ ಬೆಳಗುವ ಜ್ಯೋತಿ ಲೋಕಾಲೋಕದಿ ಅಮರತ್ವ ಬೆಳಕಿಗೆ ಖ್ಯಾತಿ ಸುಡುವೆ; ಸರ್ವವನು ಮಾರಿಯಾದೆಡೆ ಬೆಂಕಿ ಕಾರಿ ಬೆಳಗುವೆ ಸೂರ್ಯ ಚಂದ್ರ ತಾರೆಯಾಗಿ ನಾರಿ ತೋರುವೆ ಜಗನ್ಮಾತೆಯಾಗಿ ಸತ್ಯಕೆ ದಾರಿ ನೀನಿರದೆ ಕತ್ತಲೆಯ ಕೂಪ ನಮ್ಬಾಳು ಪ್ರತಿ ಬಾರಿ ಸುಟ್ಟು ದಾಸ್ಯದ ಬಲೆ, ನೆಲೆ ನೀಡುವ ಪ್ರಣತಿ ಹುಟ್ಟು ಸಾವಿಗಳುಕದೆ ಕಾಯಕ ನಿರತ ದೀಪವತಿ ಮುಕ್ತ ಮುಕ್ತಿದಾತೆ; ಧೀಶಕ್ತ ಜ್ಯೋತಿ ನಮಿಸುವೆ ಯುಕ್ತ ಉಕ್ತಿ ಬಿತ್ತರಿಸುವ ಸೆಳೆವು ಸ್ತುತಿಸುವೆ ಹೆಣ್ಣಿನ ಪ್ರತಿರೂಪದಿ ವಿಶ್ವರೂಪ ಧಾರಿಣಿ ಅನಂತ ಜಗದುಳುವಿಗೆ ಜ್ಯೋತಿ ತಾ ಕಾರಿಣಿ ಏರುವಿಳಿತಕಂಜದೆ ಗುರಿಯೆಡೆಗೆ ಚಾರಣಿ ಸುಟ್ಟು ತನ್ದೇಹ ಪರೋಪಕಾರ ಮೆರೆವ ಕರುಣಿ

----------------------------------

ನೋಂದಣಿ ಐಡಿ : KPFS2-8748

1
Votes
160
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top